ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಜೀರಿಯಾ ವಿರುದ್ಧ ಗೆಲುವು: 16 ಘಟ್ಟಕ್ಕೆ ಅರ್ಜೆಂಟಿನಾ

Last Updated 27 ಜೂನ್ 2018, 2:01 IST
ಅಕ್ಷರ ಗಾತ್ರ

ಸೆಂಟ್ ಪೀಟರ್ಸ್‌ಬರ್ಗ್: ಮಹತ್ವದ ಪಂದ್ಯದಲ್ಲಿ ಜಯ ಗಳಿಸುವ ಮೂಲಕ ಅರ್ಜೆಂಟಿನಾ ತಂಡವು ಫಿಫಾ ಫುಟ್‌ಬಾಲ್ ವಿಶ್ವಕಪ್‌ ಟೂರ್ನಿಯ 16ರ ಘಟ್ಟ ಪ್ರವೇಶಿಸಿದೆ.

ಮಂಗಳವಾರ ರಾತ್ರಿ ನೈಜೀರಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಲಿಯೊನೆಲ್‌ ಮೆಸ್ಸಿ ನೇತೃತ್ವದ ತಂಡ 2-1 ಅಂತರದ ಗೆಲುವು ಸಾಧಿಸಿತು. 86ನೇ ನಿಮಿಷದಲ್ಲಿ ಮಾರ್ಕೊಸ್ ರೋಜೊ ಅವರು ಗಳಿಸಿದ ಗೋಲು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.

ಗೆಲ್ಲಲೇಬೇಕಾದ ಒತ್ತಡದೊಂದಿಗೆ ಕಣಕ್ಕಿಳಿದಿದ್ದ ಅರ್ಜೆಂಟಿನಾಗೆ 14ನೇ ನಿಮಿಷದಲ್ಲೇ ಗೋಲು ಗಳಿಸುವ ಮೂಲಕ ಮೆಸ್ಸಿ ಮುನ್ನಡೆ ತಂದಿತ್ತರು. ಮೊದಲಾರ್ಧದಲ್ಲಿ ಉತ್ತಮ ಆಟ ಪ್ರದರ್ಶಿಸಿದ ಅರ್ಜೆಂಟಿನಾಗೆ ದ್ವಿತೀಯಾರ್ಧದಲ್ಲಿ ತುಸು ಹಿನ್ನಡೆಯಾಯಿತು. ಪೆನಾಲ್ಟಿ ಅವಕಾಶ ಪಡೆದ ನೈಜೀರಿಯಾ ಸಮಬಲ ಸಾಧಿಸಿತು. ಆದರೆ ಮತ್ತೊಂದು ಗೋಲು ಗಳಿಸುವ ಅವಕಾಶ ವ್ಯರ್ಥಮಾಡಿಕೊಂಡಿದ್ದರಿಂದ ಕೂಟದಿಂದ ನಿರ್ಗಮಿಸಬೇಕಾಯಿತು.

ಈ ಗೆಲುವಿನಿಂದ ಅರ್ಜೆಂಟಿನಾಗೆ ಡಿ ಗ್ರೂಪ್‌ನಲ್ಲಿ ಎರಡನೇ ಸ್ಥಾನ ದೊರೆಯುವಂತಾಗಿದೆ. 16ರ ಘಟ್ಟದ ಪಂದ್ಯದಲ್ಲಿ ಅರ್ಜೆಂಟಿನಾ ಶನಿವಾರ ಫ್ರಾನ್ಸ್ ತಂಡವನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT